Friday, December 14
ಅಂತೂ ಬಂತು ಕುಡ್ಲಕ್ಕೆ ರೈಲು . . .
ಸುಮಾರು ವರ್ಷದ ಮೊದಲು ನಮ್ಮ ಊರಿನಲ್ಲಿ ಸ ರೈಲು ಹೋಗ್ತಾ ಇತ್ತು. ಬೆಳಿಗ್ಗೆ ಬೇಗ ಎದ್ದ ದಿನ ಅದ್ರ ಚುಕುಬುಕು ಕೇಳ್ತಾ ಇತ್ತು. ಆಗ ಅದೆಂತದೋ ' ಮೀಟರ್ ಗೇಜು ' ಅಂತ ನಮ್ಮ ಪಗೆಲನ ಹಾಗೆ ಸಪೂರದ್ದು ಇದ್ದದ್ದಂತೆ. ಅದನ್ನು ತೆಗ್ದು ಪೆರ್ಮರಿಯ ಹಾಗೆ ತೋರದ್ದು 'ಬ್ರೋಡು ಗೇಜು ' ಹಾಕ್ತೇವೆ ಅಂತ ಹೇಳಿಕೊಂಡು ಇದ್ದದ್ದನು ತೆಗ್ದ್ರಂತೆ . ನನಿಗೆ ಎಲ್ಲ ಸ ಸರಿಯಾಗಿ ನೆನ್ಪಿಲ್ಲ, ಅಷ್ಟು ಸಾ ಮೊದ್ಲು ಆದ ಕತೆ ಅಲ್ವಾ. ನಮ್ಮ ಆಚೆಮನೆ ಮಾಷ್ಟ್ರ ಮಗ ಪೀಯೂಸಿ ಕೊಲೇಜಿಗೆ ಪುತ್ತೂರಿಗೆ ಹೋಗ್ಲಿಕ್ಕೆ ಸುರು ಮಾಡಿದ್ದ ಟೈಮಿನಲ್ಲಿ ರೈಲು ಹೋಗ್ತಾ ಇತ್ತಂತೆ. ಸ್ಪೆಶಲು ಕ್ಲಾಸು ಅಂತ ಬೇಗ ಹೋದ ದಿವ್ಸ ಎಲ್ಲ , ರೈಲು ಮಾರ್ಗದ ಸಂಕ ದಾಟಿ ಹೋಗುವಾಗ ರೈಲು ಕಂಡುಕೊಂಡು ಇತ್ತಂತೆ, ಕೆಲವು ಸರ್ತಿ. ಈಗ ಆ ಹುಡುಗನಿಗೆ ಮದಿಮ್ಮೆ ಪ್ರಾಯ ಬಂದಿದೆ, ಎಷ್ಟು ಬೇಗ ಈ ಜವ್ವನರು ದೊಡ್ಡ ಆಗ್ತಾರೇಂತ ಅನಿಸ್ತದೆ ಮಾತ್ರ, ನೋಡಿದ್ರೆ ಬೇಗ ಅಲ್ಲ, ಅಷ್ಟು ಸಮಯ ಸ ಆಯ್ತು. :)
ಮೊನ್ನೆ ೮ಕ್ಕೆ ಲಾಲು ಬಂದು ಪಚ್ಚೆ ಬಾವುಟ ತೋರಿಸಿ ರೈಲು ಬಿಟ್ಟದ್ದಲ್ವ ಆಗ್ಲೇ ಮತ್ತೆ ರೈಲಿನ ಶಬ್ದ ಕೇಳಿದ್ದು.
ಎಂತ ಮಾಡಿದ್ದು ಇಷ್ಟು ಸಮಯ ಅಂತ, ಆಶರ್ಯ ಆಗ್ತದೆ ಮಾರೆ. ಅವತ್ತು ಆ ರೈಲು ಮಾರ್ಗ ಪಷ್ಟಿಗೆ ಮಾಡುವಾಗ ಸ ಇಷ್ಟು ಸಮಯ ತೆಕ್ಕೊಂದಿದ್ದಾರ ಇಲ್ವ ಅಂತ ಡೌಟು ಬರ್ತದೆ . ನಿಜವಾಗಿ ನೋಡಿದ್ರೆ ಬೆಂಗ್ಲೂರಿನಿಂದ ಹಾಸನದ ವರೆಗೆ ಎಲ್ಲ ಸ ಸರಿ ಆಗಿ ಇತ್ತು, ಇವ್ರಿಗೆ ಕೆಲಸ ಮಾಡ್ಲಿಕ್ಕೆ ಇದ್ದದ್ದು ಹಾಸನದಿಂದ ಮಂಗ್ಲೂರಿನ ವರೆಗೆ ಮಾತ್ರ, ಅದು ಸಾ ಬೇಗ ಆಗ್ಲಿಲ್ಲ ಅಂತ ಹೇಳಿದ್ರೆ .
ಎಂತ ಅವಸ್ತೆ . ಹೆಕ್ಕ್ .
ಎಂತ ಗೊತ್ತುಂಟ: ಗಂಡ ಹೊಸ ಸೀರೆ ತರ್ತಾನೆ ಅಂತ ಇದ್ದ ಸೀರೆ ಎಲ್ಲ ದಿಕ್ಕೆಲಿಗೆ ಹಾಕಿ ಬಾಗಿಲು ಹಾಕಿ ಕೂತ ಹೆಂಡತ್ತಿಯ ಕತೆಯ ಹಾಗೆ ಮಾಡಿದ್ರು ಇವ್ರು, ಹೊಸ ರೈಲು ಮಾರ್ಗಕ್ಕೆ ಅಗಲದ ಪಟ್ಟಿ ಆಗ್ಬೇಕು ಅಂತ ಮೊದಲಿನದ್ದು ಎಲ್ಲ ತೆಗದು ಸೈಡಿನಲ್ಲಿ ಇಟ್ರು. ಗೇಜು ಪರಿವರ್ತನೆ ಅಂತ, ಮತ್ತೆ ವರ್ಷಗಟ್ಲೆ ಅದರ ಸುದ್ದಿಗೆ ಬರಲಿಲ್ಲ, ಆ ಮೊದ್ಲಿನ ರೈಲು ಪಟ್ಟಿಯ ಜಲ್ಲಿ ಕಲ್ಲು ಉಳೀತದ ? ಅದು ಈಗ ಎಷ್ಟೋ ಜೆನರ ಟೆರೀಸು ಮನೆಯ ಕೋಂಗ್ರೇಟು ಪೌನ್ಡೆಶನ್ ನ ಅಡಿಯಲ್ಲಿ ಉಂಟು, ಪಾಪ. ಎಲ್ಲೋರು ಸುಬಗರೇ . ಈಗ ಯಾರತ್ರೆ ಅಂತ ಕೆಳುದು. ಮತ್ತೆ ಪುನಾ ಹಾಕಿ ಆಗ್ಬೇಕಷ್ಟೇ. ಹೊಸ ಪಟ್ಟಿ ಹಾಕ್ಲಿಕ್ಕೆ ಆಗುವಾಗ ಹಳತ್ತು ತೆಗೀಬೇಕಿತ್ತು, ಇದು ಮೊದಲೇ ತೆಗ್ದು ಎಲ್ಲ ಕಾಲಿ.! ಅಂತೂ ಇಂತೂ ಎಲ್ಲೋರೂ ಬೈದು ಅಕೇರಿಗೆ ಸುಬ್ರಮ್ಮಣ್ಯ ದ ವರೆಗೆ ಹಾಕಿದ್ರು, ಪೆಸೆನ್ಜರ್ ರೈಲು. ಕುಡ್ಲದಿಂದ ಸುಬ್ರಮ್ಮಣ್ಯ ಕ್ಕೆ ಹೋಗುವವರಿಗೆ ಅತವ ಸುಬ್ರಮ್ಮಣ್ಯ ಕ್ಕೆ ಬಂದ ಗಟ್ಟದವರಿಗೆ ಮಂಗಳೂರಿಗೆ ಹೋಗಲಿಕ್ಕೆ ಎಲ್ಲ ಅನುಕೂಲ ಆಗ್ತ ಇತ್ತೋ ಏನೋ. ಆದ್ರೆ ಸ ಗಟ್ಟಕ್ಕೆ ರೈಲು ಹತ್ತುವ ಹಾಗೆ ಆಗ್ಲಿಲ್ಲ.ಅದ್ರ ಹಿಂದೆ ನಮ್ಮ ಊರಿನ ಕೆಲವು ಪ್ರೈವೇತು ಬಸ್ಸುಗಳ ದನಿಗಳ ಕೈವಾಡ ಉಂಟು ಮಾರ್ರೆ ಅಂತ ನಮ್ಮ ಊರಿನಲ್ಲಿ ಮಾತಾಡ್ತಾ ಇದ್ರು, ಅವ್ರು ಪೈಸೆ ಕೊಟ್ಟು ಆ ರೈಲನ್ನು ತಡವು ಮಾಡಿಸೂದು , ಬಸ್ಸಿನವ್ರಿಗೆ ಜೆನ ಬರ್ತಾ ಇರ್ತದೆ ಅಲ್ವ, ಅದಿಕ್ಕೆ.
ಅಕೇರಿಗೆ ಇವತ್ತು ನಾಳೆ ಇವತ್ತು ನಾಳೆ ಅಂತ ಮೊನ್ನೆ ನಮ್ಮ ಲಾಲು ಬಂದು ರೈಲು ಸುರು ಮಾಡಿದ. ಈಗ ಸರಾಗ ಹೋಗ್ತಾ ಉಂಟು, ೧ ವಾರ ಆಯ್ತು, ಒಳ್ಳೆ ಜನ ಬರ್ತದಂತೆ, ಬಸ್ಸುಗಳಿಗೆ ಒಳ್ಳೆತ ಪೆಟ್ಟು ಉಂಟು ಅಂತ ಮಾತಾಡಿಕೊಳ್ತಾರೆ. ಯಾಕೆಳಿದ್ರೆ ಇದ್ರಲ್ಲಿ ಹೋಗೂದು ಬಾರಿ ಆರಾಮ ಅಲ್ವ, ಮಂಚದಲ್ಲಿ ಮಲಗಿದ ಹಾಗೆ ಮಲಗಲಿಕ್ಕೆ ಆಗ್ತದೆ. ಹೋಗುವಾಗ ಪಜೆಮಂದ್ರಿ ತೆಕ್ಕೊಂದ್ರೆ ಮನೆಯಲ್ಲಿ ಇದ್ದ ಹಾಗೆ ಆಗ್ತದೆ. ಸುಬ್ರಮ್ಮಣ್ಯ ಕ್ಕೆ ಬಂದ ಗಟ್ಟದವ್ರು ಕಂಡಾಬಟ್ಟೆ ಜೆನ ರೈಲಿನ ಪ್ರಯೋಜನ ಪಡೀತಾರಂತೆ. ಬರುವಾಗ ಗಟ್ಟದ ಗೌಡುಗಳಿಗೆ ನಮ್ಮ ಊರಿನ ಸಂತೆಗಳಿಗೆ ತರ್ಕಾರಿ ಎಲ್ಲ ತರ್ಲಿಕ್ಕೆ ಸ ಬಾರಿ ಸುಲಬ ಆಯ್ತು. ಅಲ್ವ ?
ಅವತ್ತೇ ಆಗಬೇಕಾದ ಸೌಕರ್ಯ ಈಗ ಸಿಕ್ಕಿತು ನಮಿಗೆ.
ಅಂತೂ ನಮ್ಮ ಕುಡ್ಲಕ್ಕೆ ಸ ರೈಲು ಬಂತು .
Labels:
kudla,
mangalore train,
ಮಂಗಳೂರು,
ರೈಲು
Monday, December 10
ಅಂಬುರುಹದಳ. . .
ಅಂತೂ ಇಂತೂ ಬರೀಲಿಕ್ಕೆ ಸುರು ಮಾಡಿದೆ ನಾನು.
ತುಂಬ ಸಮಯ ಆಯ್ತು ಈ ಬ್ಲೋಗು ರಚನೆ ಮಾಡಿ, ಒಂದು ಲೇಖನ ಸಾ ಹಾಕ್ಲಿಕ್ಕೆ ಪುರುಸೊತ್ತೇ ಸಿಕ್ಕಿಕೊಂಡು ಇರ್ಲಿಲ್ಲ.
ಈಗ ಸ್ವಲ್ಪ ಪುರ್ಸೊತ್ತು ಸಿಕ್ಕಿತು, ಅರ್ಜ್ಜಂಟಿನಲ್ಲಿ ಎರಡು ಪೋಷ್ಟು ಮಾಡ್ತೇನೆ ಅಂತ ಗ್ರೇಶಿದ್ದು.
ಎಲ್ಲಿಂದ ಸುರು ಮಾಡ್ಬೇಕು?
ಹಾಂ..
ನೋಡಿ,ಇದನ್ನು ಬರೀಲಿಕ್ಕೆ ಒಂದು ಕಾರಣ ಉಂಟಲ್ಲ, ಅದನ್ನು ಹೇಳ್ತೇನೆ ಸುರೂವಿಗೆ.
ಭಾರತದಲ್ಲಿ ಹಲವು ನಮೂನೆಯ ಕನ್ನಡಗಳುಂಟು,ಬೇರೆ ಬೇರೆ ಪ್ರದೇಶದವರು ಬೇರೆ ಬೇರೆ ತರ ಮಾತಾಡ್ತಾರೆ. ಆ ಮಾತಿನ ಶೈಲಿ, ಧಾಟಿಗಳು ಆಯಾ ಪ್ರದೇಶದ ಜೀವನ ಪದ್ಧತಿಗೆ ಮತ್ತೆ ಲೈಫ್-ಸ್ಟೈಲ್‘ಗೆ ಹಾಸುಹೊಕ್ಕಾಗಿ ಇರ್ತದೆ.
ಗುಲ್ಬರ್ಗ,ಮೈಸೂರು,ಬೆಂಗ್ಳೂರಿನಂತಹ ಪಟ್ಟಣಗಳಲ್ಲಿ ಒಂದು ಥರ,ಮಂಡ್ಯ, ಹಾಸನದಂತಹ ಪ್ರದೇಶಗಳಲ್ಲಿ ಒಂದು ಥರ,ಮಂಗ್ಳೂರಿನಲ್ಲಿ ಒಂದು ಥರ,ಕುಂದಾಪುರದಲ್ಲಿ ಒಂದು ಥರ..ಇತ್ಯಾದಿ...
ಮಂಗ್ಳೂರಿನಲ್ಲಿ ಮಾತಾಡುವ ಕನ್ನಡಕ್ಕೆ ಸ್ವಲ್ಪ ವಿಶೇಶ ಉಂಟು. ಮಂಗ್ಳೂರು ಕನ್ನಡ ಅಂತ ಹೇಳಿದ್ರೆ- ಅಂದಾಜಿ ಉಡುಪಿಯಿಂದ ಕಾಸರಗೋಡಿನ ವರೆಗೆ, ಶಿರಾಡಿಯಿಂದ ಕುಕ್ಕೆ ಸುಬ್ರಮಣ್ಯದವರೆಗೆ ಶಾಲೆಗಳಲ್ಲಿ ಮಾತಾಡುವ ಕನ್ನಡ ಅಂತ ಹೇಳ್ಭೌದು. ಹೆಚ್ಚಾಗಿ ಎಲ್ಲರು ಸ ಮನೆಯಲ್ಲಿ ಬೇರೆ ಭಾಶೆಯನ್ನೇ ಮಾತಾಡೂದ್ರಿಂದ ಅಲ್ಲಿ ಮನೆಭಾಶೆಯಾಗಿ ಕನ್ನಡ ಮಾತಾಡೂದು ತುಂಬ ಕಡಿಮೆ ಜನ. ಕನ್ನಡವನ್ನು ತುಂಬ Official ಭಾಶೆಯ ಹಾಗೆ ಬಳಸೂದ್ರಿಂದ- ಹೇಳಿದ್ರೆ, ಭಾಷಣ ಮಾಡ್ಲಿಕ್ಕೆ, ಸರಕಾರೀ ಕಛೇರಿಗಳಲ್ಲಿ, ಶಾಲೆಯಲ್ಲಿ ಮಾಷ್ಟ್ರುಗಳ ಹತ್ತಿರ - ಅಂತ ಕೆಲವೇ ಕಡೆಗಳಲ್ಲಿ ಮಾತ್ರಾ ಕನ್ನಡ ಮಾತಾಡೂದು, ಮತ್ತೆಲ್ಲ ಕಡೆ ತುಳುವೋ, ಮಲೆಯಾಳವೋ, ಕನ್ನಡಕ್ಕೆ ಹತ್ತಿರವಾದ ಹವ್ಯಕವೋ, ಗೌಡರ ಅರೆ-ಭಾಷೆಯೋ, ಹಿಂದಿಗೆ ಹತ್ತಿರದ ಕೊಂಕಣಿ, ಕರಾಡ, ಮರಾಟಿ ಭಾಷೆಯೋ ಎನಾದ್ರು ಮಾತಾಡುದ್ರಿಂದ ಕನ್ನಡ ಇನ್ನೂಸ ಗ್ರಂಥರೂಪದಿಂದ ಬಹಳ ವೆತ್ಯಾಸ ಆಗ್ಲಿಲ್ಲ ಅಂತ ಕಾಣುವ ಹಾಗೆ ಉಂಟು!
ಹಾಗೆ ಇದ್ರೆಸ ಮಂಗ್ಳೂರಿನ ಪರಿಸರದಿಂದ ಕರ್ನಾಟಕದ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆಗಳು ಬಂದದೆ.
ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶ ರಾಯರು, ಮಂಜೇಶ್ವರ ಗೋವಿಂದ ಪೈಗಳು, ಕೈಯಾರ ಕಿಂಞಣ್ಣ ರೈಗಳು ಇವರೆಲ್ಲರು ಸಾ ಮಂಗ್ಳೂರು ಕನ್ನಡಮ್ಮನ ಮಕ್ಕಳು.
ಅದಿರ್ಲಿ.. ಇವತ್ತು ಎಂತ ಆಗಿದೆ ಗೊತ್ತುಂಟಾ, ಸಿನೆಮದಲ್ಲಿ ಎಲ್ಲ ಒಂದು ಮಂಗ್ಳೂರು/ ಉಡುಪಿಯ ಕ್ಯಾರೆಕ್ಟರ್ ಬೇಕಾದ್ರೆ, ಒಬ್ಬ ಗಟ್ಟದ ಮೇಲಿನವನ ಹತ್ತಿರ ನಾಲ್ಕು ಸರ್ತಿ ಮಾರಾಯ್ರೆ, ಮಾರಾಯ್ರೆ... ಅಂತ ಹೇಳಿಸಿ ಬಿಡ್ತಾರೆ. ನಿಜವಾದ ಮಂಗ್ಳೂರು ಕನ್ನಡ ಅವರಿಗೆ ಮಾತಾಡ್ಲಿಕ್ಕೇ ಬರೂದಿಲ್ಲ - ಕೇಳಿಸ ಗೊತ್ತಿರೂದಿಲ್ಲ.
ನಾನು ಹುಟ್ಟಿ, ಬೆಳ್ದದ್ದು ಆ ಪರಿಸರ ಆದ ಕಾರಣ, ನನಿಗೆ ಚಿಕ್ಕದಿರುವಾಗಲೇ ಈ ವಿಶಿಷ್ಟ ಕಂನಡ ಕೇಳಿ, ಮಾತಾಡಿ ಗೊತ್ತುಂಟು. ಈಗ ಕೆಲಸಕ್ಕೇಂತ ಬೆಂಗ್ಳೂರಿಗೆ ಬಂದ ಕಾರಣ ನನ್ನ ಊರಿನ ಕನ್ನಡ ಕೇಳ್ಳಿಕ್ಕೆ ಸ ಸಿಕ್ಕುದಿಲ್ಲ. ವೆಬ್ ಸೈಟುಗಳಲ್ಲಿ ಎಲ್ಲ ಇರೂದು ಬೆಂಗ್ಳೂರ್ ಕನ್ನಡ, ಅತವಾ ಗ್ರಂಥ ಕನ್ನಡ ಮಾತ್ರ, ನಮ್ಮ ಕನ್ನಡ ಎಲ್ಲಿ ಸ ಇಲ್ಲ. ಅದಿಕ್ಕೆ ಈ ಪುಟದಲ್ಲಿ ಬ್ಲಾಗಿಸುವಾ ಅಂತ ಗ್ರೇಶಿದ್ದು.
ಆದೀತೋ? ಹೇಗೆ?
ನಾನು ಬರಿಯೂದು ಎಂತ ಅಂತ ಹೇಳಿದ್ರೆ, ಮನಸ್ಸಿಗೆ ತೋಚಿದ್ದು, ಮನುಷ್ಯನಿಗೆ ಸಂಬಂಧಿಸಿದ್ದು.
ಗೊತ್ತಾಯ್ತಾ..?
ಓದುಗರ Comfort Zone ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ತೇನೆ ಅಂತ ನಾನು ತಿಳ್ಕೊಳ್ತೇನೆ..
ನಿಮ್ಮ ಪ್ರತಿಕ್ರಿಯೆಯನ್ನು ಆದಷ್ಟು ಮಂಗ್ಳೂರು ಕನ್ನಡದಲ್ಲೇ ಬರೀರಿ, ಆಯ್ತಾ. . . ?
ಒಂದುಸಮಯ ಸರಿಯಾಗಿ ಗೊತ್ತಿಲ್ಲದಿದ್ರೆ, ನಾಲ್ಕು ಸರ್ತಿ ಈ ಬ್ಲೋಗನ್ನು ಓದಿ, ಆಗ ನಿಮಿಗೇ ಆ ರೀತಿ ಮಾತಾಡ್ಳಿಕ್ಕೆ ಬರ್ತದೆ. ಮತ್ತೆ ಪೋಷ್ಟು ಮಾಡಿ.
ಬಂದುಕೋಂಡು ಇರಿ ಮಾರಾಯ್ರೆ.. .
ನಮಸ್ಕಾರ. .
ನಿಮ್ಮ ಮಾಣಿ,
ಮಹೇಶ ಎಳ್ಯಡ್ಕ

ಕನ್ನಡ,
ಮಂಗಳೂರು ಕನ್ನಡ,
ಮಹೇಶ ಎಳ್ಯಡ್ಕ
Thursday, December 6
Typical Mangalorean
ಇಲ್ಲಿ ನಾನು ಒಬ್ಬ Typical ಮಂಗಳೂರಿನವನಾಗಿ ಬ್ಲಾಗಿಸುತ್ತೇನೆ.
ಈಗ ಸ್ವಲ್ಪ ಪುರುಸೊತ್ತು ಕಮ್ಮಿ ಆಗ್ಯದೆ .
ಬರ್ತೇನೆ ಆಯ್ತಾ..
ಕಾದುಕೊಂಡು ಇರಿ ಮಾರ್ರೆ . . .
:)
Labels:
elliadka,
Introduction,
mahesh,
mahesha,
manglaore
Subscribe to:
Posts (Atom)